ಅಮೈಲ್ ನೈಟ್ರೈಟ್ ರಕ್ತನಾಳಗಳನ್ನು ಹಿಗ್ಗಿಸುವುದರಿಂದ ಗುಂಡಿಗೆಯ ರೋಗದಿಂದೇಳುವ ಎದೆಸೆರೆಬಿಗಿತವನ್ನು (ಅಂಜೈನ ಪೆಕ್ಟೊರಿಸ್) ಕಳೆಯಲು ಬಳಸುವ ದ್ರವಮದ್ದು. ಇದರ ರಾಸಾಯನಿಕ ಸೂತ್ರ C5H11ONO. == ತಯಾರಿಕೆ == ಹಿಟ್ಟು, ನೈಟ್ರಿಕಾಮ್ಲಗಳಿಂದ ಬರುವ ನೈಟ್ರಸ್ ಆವಿಯನ್ನು ಬೆಚ್ಚನೆಯ ಐಸೊಅಮೈಲ್ ಮದ್ಯಸಾರದೊಳಗೆ ಹಾಯಿಸುವುದರಿಂದಲೋ 15 ಪಾಲು ನೀರಲ್ಲಿರುವ 26 ಪಾಲು ಐಸೊಅಮೈಲ್ ಮದ್ಯಸಾರವನ್ನು ಕೂಡಿಸಿ ಬಟ್ಟಿಯಿಳಿಸುವುದರಿಂದಲೋ ತಯಾರಾಗುತ್ತದೆ. == ಲಕ್ಷಣಗಳು == ತುಸು ಚೊಕ್ಕ ಹಳದಿ ಬಣ್ಣದ, ಬಲು ಸುಲಭವಾಗಿ ಆರಿಹೋಗುವ, ಹತ್ತಿಕೊಂಡುರಿವ, (ಕುದಿವ ಮಟ್ಟ 95೦ - 96೦ ಸೆಂ.ಗ್ರೇ). ವಿಶಿಷ್ಟಚೊಗರಿನ ಹಣ್ಣಿನ ವಾಸನೆಯ ದ್ರವ. ಹತ್ತಿರ ಬೆಂಕಿ, ಉರಿ ಇದ್ದಲ್ಲಿ ಸಿಡಿಯಬಹುದು. ಈ ರಾಸಾಯನಿಕ ನೀರಲ್ಲಿ ವಿಲೀನವಾಗದಿದ್ದರೂ ಸಲೀಸಾಗಿ ಮದ್ಯಸಾರ, ಈಥರ್, ಹಿಮದಂದ, ಅಸೆಟಿಕಾಮ್ಲ, ಕ್ಲೋರೋಫಾರ್ಮ್, ಬೆಂಜೀನ್‍ಗಳಲ್ಲಿ ವಿಲೀನವಾಗುತ್ತದೆ. == ಔಷಧ == ಬಹುಮಟ್ಟಿಗೆ ಗುಂಡಿಗೆ ರೋಗಿಗಳು ಅನುಭವಿಸುವ ಮಾರಕ ಎದೆಶೂಲೆಯನ್ನು ಈ ದ್ರವ ಸರಕ್ಕನೆ ಕಳೆವುದು. ಶೂಲೆ ಬರುವ ಮುನ್ಸೂಚನೆ ಕಂಡಕೂಡಲೇ ತೆಗೆದುಕೊಳ್ಳಲು, ತೆಳುವಾದ ಗಾಜಿನ ಕಿರುಸೀಸೆಗಳಲ್ಲಿರುವ ಈ ದ್ರವವನ್ನು ರೋಗಿಗಳು ಯಾವಾಗಲೂ ಕಿಸೆಯಲ್ಲಿ ಇಟ್ಟುಕೊಂಡಿರುವವರು. ಬೇಕೆಂದಾಗ ಕೈವಸ್ತ್ರದ ಪದರಗಳಲ್ಲಿರಿಸಿ ಅಮುಕಿದಾಗ ಟಪಾರೆಂದು ಸದ್ದಾಗಿ ಒಡೆದು (0.3 ಮಿ.ರೇ.) ದ್ರವ ಕೂಡಲೇ ಆವಿಯಾಗಿ ಬರುವುದನ್ನು ಮೂಗಿನ ಬಳಿ ಹಿಡಿದು ಉಸಿರಲ್ಲಿ ಸೇದಿಕೊಳ್ಳುವರು. ಇದರ ಪ್ರಭಾವ ಸರಕ್ಕನೆ ಕಾಣಿಸಿಕೊಂಡು 3 ಮಿನಿಟು ಹೊತ್ತು ಇರಬಹುದು. ಹಲವು ವೇಳೆ ಮೊಗ ಕೆಂಪೇರಿ, ತಲೆನೋವಿನ ಸಿಡಿತ, ತಲೆತಿರುಗೂ ಆಗುವುದು ಅನಾನುಕೂಲ. ಇದ್ದಕ್ಕಿದ್ದಂತೆ ರಕ್ತದ ಒತ್ತಡ ಕುಸಿಯುತ್ತದೆ. ಕೋಣೆಯೆಲ್ಲ ಇದರ ಕಂಪು ಹರಡಿಕೊಳ್ಳುತ್ತದೆ. ಸಯನೈಡುಗಳ ವಿಷವೇರಿಕೆಯಲ್ಲೂ ಇದರ ಬಳಕೆಯಾಗುವುದು. ಡೈಯಜೋನಿಯಂ, ಐಸೊನೈಟ್ರೊಸೊ ಸಂಯುಕ್ತಗಳನ್ನು ತಯಾರಿಸಲೂ ತುಸುಮಟ್ಟಿಗೆ ಬಳಸುವುದುಂಟು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == , . (1996). ": ". . 73 (12): 1127. :1996JChEd..73.1127K. :10.1021/ed073p1127. "".